ಆಕೆ ಆತನನ್ನು ತೊರೆದು ಶ್ರೀಮಂತನೋಬ್ಬನನ್ನು ಮದುವೆಯಾಗಿದ್ದಳು. ಆಕಸ್ಮಿಕವಾಗಿ ಎದುರಿಗೆ ಸಿಕ್ಕ ಆತನನ್ನು ಉದ್ದೇಶಿಸಿ 'ನಾನು ಸಿಗದಿದ್ದರೆ ಬದುಕಿರಲಾರೆ ಅಂತಿದ್ದೆ .. ಆದ್ರೆ ಆಗಲೂ ಬದುಕಿದ್ಯಾ? ಆಕೆ ಕುಟುಕಿದಳು. 'ಎಲ್ಲಿ ಬದುಕಿದ್ದೇನೆ.. ನೀನು ಜೀವ ತೆಗೆದ ಶವವನ್ನು ಹೊತ್ತು ತಿರುಗಾದುತ್ತಿದ್ದೇನೆ ' ಆತ ನಿರ್ಲಿಪ್ತನಾಗಿ ಉತ್ತರಿಸಿದ.